ಮನರಂಜನೆಗಾಗಿ ತಯಾರಿಸಿದ ಸ್ಕ್ರಿಪ್ಟೆಡ್ ವೀಡಿಯೊವನ್ನು ಬಸ್ಸಿನಲ್ಲಿ ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸುವ ಪುರುಷ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ (ಇಲ್ಲಿ) ಒಂದು ವೀಡಿಯೊದಲ್ಲಿ, ದೆಹಲಿಯ ಬಸ್ಸಿನೊಳಗೆ ಕೆಲವು ಪುರುಷರು ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ವೀಡಿಯೊದಲ್ಲಿ, ಕೆಲ ಪುರುಷರು ಮಹಿಳಾ ಪ್ರಯಾಣಿಕಳನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದನ್ನು ನಾವು ನೋಡಬಹುದು. ಈ ಲೇಖನದ ಮೂಲಕ ನಾವು ಈ ಕ್ಲೇಮ್‌ನ  ಸತ್ಯಾಸತ್ಯತೆಯನ್ನು ಪರಿಸೇರಿಸೋಣ.

ಕ್ಲೇಮ್: ದೆಹಲಿಯ ಬಸ್ಸಿನೊಳಗೆ ಪುರುಷರಿಂದ ಯುವತಿಗೆ ಕಿರುಕುಳ ನೀಡಿದ ವೀಡಿಯೊ.

ಫ್ಯಾಕ್ಟ್: ​ಇದು  ಸೋಶಿಯಲ್ ಮೀಡಿಯಾ ಕಾಂಟೆಂಟ್ ಕ್ರಿಯೇಟರ್ ಅಮನ್ ಬೇನಿವಾಲ್ ಅವರು ತಯಾರಿಸಿದ ಸ್ಕ್ರಿಪ್ಟೆಡ್ ವೀಡಿಯೊ. ದೆಹಲಿಯಲ್ಲಿ ನಡೆದ ಯಾವುದೇ ನಿಜವಾದ ಘಟನೆಯನ್ನು ತೋರಿಸುತ್ತಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.  

ವೈರಲ್ ಆಗಿರುವ ಈ ಕ್ಲೇಮ್ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದೆವು ಮತ್ತು ವೈರಲ್ ವೀಡಿಯೊದ ದೃಶ್ಯಗಳನ್ನು ಹೊಂದಿರುವ ಕೆಲವು ಪೋಸ್ಟ್‌ಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡೆವು. ಈ ಪೋಸ್ಟ್‌ಗಳಲ್ಲಿ ಒಂದರ ವೀಡಿಯೊದಲ್ಲಿ ‘Full video:- beniwal’ ಎಂಬ ವಾಟರ್‌ಮಾರ್ಕ್  ಇತ್ತು.

ಇದನ್ನು  ಸುಳಿವಾಗಿ ತೆಗೆದುಕೊಂಡು, ನಾವು ಕೀವರ್ಡ್ ಸರ್ಚ್ ಮಾಡಿದಾಗ, ಅಮನ್ ಬೇನಿವಾಲ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಮೂಲ ವೀಡಿಯೊವನ್ನು ಕಂಡುಕೊಂಡೆವು.

ಈ ವೀಡಿಯೊದಲ್ಲಿ ಒಂದು  ಡಿಸ್ಪ್ಲೇಮರ್  ಇದ್ದು, 0:27 ಸಮಯದ ಸ್ಟ್ಯಾಂಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಅಮನ್ ಅವರು ಈ ರೀತಿಯ ಸ್ಕ್ರಿಪ್ಟೆಡ್ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ ಎಂದು ನಾವು ಕಂಡುಕೊಂಡೆವು. ಆ ವೀಡಿಯೊಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ತಮ್ಮ ಫೇಸ್‌ಬುಕ್  ಪೇಜ್ ನಲ್ಲಿ, ಅಮನ್ ಅವರು ತಮ್ಮನ್ನು ‘ಡಿಜಿಟಲ್ ಕ್ರಿಯೇಟರ್‘ ಎಂದು ಉಲ್ಲೇಖಿಸಿಕೊಂಡಿದ್ದಾರೆ

ಸಂಕ್ಷಿಪ್ತವಾಗಿ ಹೇಳುವುದಾದರೆ, ದೆಹಲಿಯ ಬಸ್ಸಿನೊಳಗೆ ಪುರುಷರು ಯುವತಿಗೆ ಕಿರುಕುಳ ನೀಡಿದ ಈ ವೀಡಿಯೊ ಸ್ಕ್ರಿಪ್ಟೆಡ್  ಆಗಿದ್ದು, ಇದು ಯಾವುದೇ ನಿಜ ಘಟನೆಯನ್ನು ಚಿತ್ರಿಸುವುದಿಲ್ಲ.