ಡಿಜಿಟಲ್ ಆಗಿ ಮಾರ್ಪಡಿಸಿದ ವೀಡಿಯೊವನ್ನು ಮಮತಾ ಬ್ಯಾನರ್ಜಿ ರಾಷ್ಟ್ರಗೀತೆ ನುಡಿಸುವಾಗ ವೇದಿಕೆಯಿಂದ ಹೊರನಡೆದಿದ್ದಾರೆ ಎಂಬ ಸುಳ್ಳು ಕ್ಲೇಮ್ ನೊಂದಿಗೆ ಹಂಚಿಕೊಳ್ಳಲಾಗಿದೆ

ರಾಷ್ಟ್ರಗೀತೆ ಮುಗಿಯುವ  ಮುನ್ನ ಮಮತಾ ಬ್ಯಾನರ್ಜಿ ಕಾರ್ಯಕ್ರಮವೊಂದರ ವೇದಿಕೆಯಿಂದ ಹೊರನಡೆಯುತ್ತಿರುವ ವೀಡಿಯೊವೊಂದು (ಇಲ್ಲಿ ) ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. “52 ಸೆಕೆಂಡುಗಳ ರಾಷ್ಟ್ರಗೀತೆಯನ್ನು ಗೌರವಿಸದವರು ದೇಶವನ್ನು ಹೇಗೆ ಗೌರವಿಸಲು ಸಾಧ್ಯ?” ಎಂಬಂತಹ  ಕ್ಲೇಮ್ ನೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮನ್ನು ಪರಿಶೀಲಿಸೋಣ

ಕ್ಲೇಮ್: ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ನುಡಿಸುತ್ತಿರುವಾಗ ಮಮತಾ ಬ್ಯಾನರ್ಜಿ ವೇದಿಕೆಯಿಂದ ಹೊರನಡೆಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಇದು ಡಿಜಿಟಲ್ ಆಗಿ ಮಾರ್ಪಡಿಸಿದ ವೀಡಿಯೊ. 2022ರ ಮಾರ್ಚ್ 23 ರಂದು ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರೀಕರಿಸಿದ ಮೂಲ ವೀಡಿಯೊದಲ್ಲಿ, ರಾಷ್ಟ್ರಗೀತೆ ಮುಗಿದ ನಂತರ ಮಮತಾ ಬ್ಯಾನರ್ಜಿ ವೇದಿಕೆಯಿಂದ ಹೊರನಡೆಯುತ್ತಿರುವುದು ಕಂಡುಬರುತ್ತದೆ. ಹೆಚ್ಚುವರಿಯಾಗಿ, ಮೂಲ ವೀಡಿಯೊದಲ್ಲಿ ‘ಜನ ಗಣ ಮನ’ದ ವಾದ್ಯ ಸಂಗೀತ   ವರ್ಷನ್ ಇದೆ. ಆದರೆ ವೈರಲ್ ವೀಡಿಯೊದಲ್ಲಿ ಮಹಿಳಾ ಗಾಯನವಿರುವ ಹಾಡನ್ನು ಸೇರಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳು.

ಮೊದಲನೆಯದಾಗಿ, ವೈರಲ್ ವೀಡಿಯೊದ ಮಧ್ಯಭಾಗದಲ್ಲಿ ಸ್ಟಾಕ್ ಇಮೇಜ್ ಮತ್ತು ವೀಡಿಯೊ ವೆಬ್‌ಸೈಟ್ ಆದ ಗೆಟ್ಟಿ ಇಮೇಜಸ್‌ನ ವಾಟರ್‌ಮಾರ್ಕ್ ಇರುವುದನ್ನು ನಾವು ಗಮನಿಸಿದ್ದೇವೆ. ವೀಡಿಯೊದ ಕೆಳಗಿನ ಎಡಭಾಗದಲ್ಲಿ, ‘1387291347’  ಸಂಖ್ಯೆಯೂ ಇದೆ. ಇದು ಗೆಟ್ಟಿ ಇಮೇಜಸ್‌ನಲ್ಲಿ ಅಪ್‌ಲೋಡ್ ಮಾಡಿದ ವಿಷಯಕ್ಕೆ ನಿಗದಿಪಡಿಸಿದ ಸಂಖ್ಯೆಯಾಗಿದೆ.

ನಂತರ ನಾವು ನೀಡಲಾದ ಸಂಖ್ಯೆಯನ್ನು ಬಳಸಿ ಗೆಟ್ಟಿ ಇಮೇಜಸ್‌ನಲ್ಲಿ ಈ ವೀಡಿಯೊಗಾಗಿ ಹುಡುಕಿದೆವು  ಅದು ನಮಗೆ ಅದೇ ವೀಡಿಯೊವನ್ನು  ತೋರಿಸಿತು. ಈ ವೀಡಿಯೊದ ವಿವರಣೆಯ ಪ್ರಕಾರ, ಇದನ್ನು 2022ರ ಮಾರ್ಚ್ 23 ರಂದು ಭಾರತದ ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ವಿಧವಾ ಪಿಂಚಣಿ ಯೋಜನೆಗಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಚಿತ್ರೀಕರಿಸಲಾಗಿದೆ.

ಇದು ವೈರಲ್ ವೀಡಿಯೊದ ಲೆಂಗ್ಜೆಸ್ಟ್ ವರ್ಷನ್, ಇದರಲ್ಲಿ ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ದ ಕೊನೆಯ ಭಾಗವನ್ನು ವಾದ್ಯ ಸಂಗೀತದ ರೂಪದಲ್ಲಿ ನುಡಿಸಲಾಗುತ್ತಿದೆ. ವೈರಲ್ ವೀಡಿಯೊದ ಹಿನ್ನೆಲೆಯಲ್ಲಿ ಮಹಿಳಾ ಗಾಯಕಿ ಹಾಡಿದ ‘ಜನ ಗಣ ಮನ’ ಕೇಳಿಬಂದರೆ,  ಇಲ್ಲಿ ವಾದ್ಯ ಸಂಗೀತವನ್ನು ಹೊಂದಿದೆ.

ವೀಡಿಯೊದಲ್ಲಿ, ರಾಷ್ಟ್ರಗೀತೆ ಮುಗಿದ ನಂತರ  ಸುಮಾರು 12ನೇ ಸೆಕೆಂಡಿನಲ್ಲಿ ಮಮತಾ ಬ್ಯಾನರ್ಜಿ ವೇದಿಕೆಯಿಂದ ನಿರ್ಗಮಿಸುವುದನ್ನು ನಾವು ನೋಡಬಹುದು. ವೈರಲ್ ವೀಡಿಯೊದಲ್ಲಿ ಚಿತ್ರಿಸಿರುವಂತೆ ಅವರು ರಾಷ್ಟ್ರಗೀತೆಯ ನಡುವೆ ಹೊರಹೋಗದೆ, ರಾಷ್ಟ್ರಗೀತೆ ಮುಗಿದ ನಂತರ ವೇದಿಕೆಯಿಂದ ಹೊರಟುಹೋದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇದಲ್ಲದೆ, ನಾವು ಸಂಬಂಧಿತ ಬಂಗಾಳಿ ಭಾಷೆಯ ಕೀವರ್ಡ್‌ಗಳನ್ನು ಬಳಸಿ  ಇಂಟರ್ನೆಟ್ ನಲ್ಲಿ ಹುಡುಕಿದಾಗ, 2022ರ ಮಾರ್ಚ್ 23 ರ ಈ ಕಾರ್ಯಕ್ರಮದ ಲೈವ್ ಸ್ಟ್ರೀಮ್‌ಗಳು ಮತ್ತು ವೀಡಿಯೊ  ಕ್ಲಿಪ್ಪಿಂಗ್ (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ದೊರೆತಿವೆ. ಇವುಗಳಲ್ಲಿ ಕೆಲವು ದೃಷ್ಟಿ ಭಂಗಿ ಮತ್ತು ಈಟಿವಿ ಭಾರತ ಪಶ್ಚಿಮ ಬಂಗಾಳದಂತಹ ಮಾಧ್ಯಮಗಳಿಂದ ಸ್ಟ್ರೀಮ್ ಆಗಿದ್ದವು.

ಒರಿಜಿನಲ್ ವೀಡಿಯೊದಲ್ಲಿ, ವೈರಲ್ ವೀಡಿಯೊದಲ್ಲಿರುವಂತೆ ಅಲ್ಲದೆ, ರಾಷ್ಟ್ರಗೀತೆಯ ವಾದ್ಯ ಸಂಗೀತವನ್ನು ತಾಮ್ರದ ವಾದ್ಯಗಳ (ಬ್ರ್ಯಾಸ್ ಬ್ಯಾಂಡ್) ಮೂಲಕ ನುಡಿಸಿರುವುದು ನಮಗೆ ಕಂಡುಬಂದಿದೆ. ವೀಡಿಯೊದಲ್ಲಿ ಇದು 29 ನಿಮಿಷ 39 ಸೆಕೆಂಡಿಗೆ ಪ್ರಾರಂಭವಾಗುತ್ತದೆ. ರಾಷ್ಟ್ರಗೀತೆ ನುಡಿಸುವಾಗ ಮಮತಾ ಬ್ಯಾನರ್ಜಿ ವೇದಿಕೆಯಿಂದ ಹೊರಹೋಗಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ಈ ವೀಡಿಯೊದಲ್ಲಿ ರಾಷ್ಟ್ರಗೀತೆಯ ಕೊನೆಯ ಭಾಗದಲ್ಲಿ ಕಾಣುವ ದೃಶ್ಯಗಳು, ವೈರಲ್ ವೀಡಿಯೊದಲ್ಲಿ ಕಂಡ ‘1387291347’ ಸಂಖ್ಯೆಯನ್ನು ಹೊಂದಿರುವ ಗೆಟ್ಟಿ ಇಮೇಜಸ್‌ನಲ್ಲಿ ನಾವು ಕಂಡುಕೊಂಡ ಸ್ಟಾಕ್ ವೀಡಿಯೊದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ. ಇದರಿಂದಾಗಿ, ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅಗೌರವ ತೋರಿಸಿ ಮಧ್ಯದಲ್ಲಿಯೇ  ತೆರಳಿದ್ದಾರೆ ಎಂದು ಬಿಂಬಿಸಲು ವೈರಲ್ ವೀಡಿಯೊವನ್ನು ರಾಷ್ಟ್ರಗೀತೆಯ ಗಾಯನದ ಟ್ರ್ಯಾಕ್‌ನೊಂದಿಗೆ  ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಕೊನೆಯದಾಗಿ ಹೇಳುವುದಾದರೆ, ಮಮತಾ ಬ್ಯಾನರ್ಜಿ ರಾಷ್ಟ್ರಗೀತೆ ನುಡಿಸುವಾಗ ವೇದಿಕೆಯಿಂದ ಹೊರನಡೆದಿದ್ದಾರೆ  ಎಂದು ಸುಳ್ಳು ಸುದ್ದಿಯನ್ನು ಶೇರ್ ಮಾಡಲಾಗುತ್ತಿದೆ.