ಸಂಸತ್ತಿನ ಪ್ರವೇಶದ್ವಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇಬ್ಬರು ಬಿಜೆಪಿ ಸಂಸದರು ಜಗಳವಾಡಿದ್ದಾರೆ ಎಂಬ ಸುದ್ದಿ ವರದಿಗಳ ನಡುವೆ (ಇಲ್ಲಿ ಮತ್ತು ಇಲ್ಲಿ), ರಾಹುಲ್ ಗಾಂಧಿ ಅವರು ಬಿಜೆಪಿ ಸಂಸದರನ್ನು ತಳ್ಳಿಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾದ ವೀಡಿಯೊ (ಇಲ್ಲಿ) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಸಂಸತ್ತಿನಲ್ಲಿ ಬಿಜೆಪಿ ಸಂಸದರನ್ನು ತಳ್ಳಿಹಾಕಿದ್ದಾಗಿ ರಾಹುಲ್ ಗಾಂಧಿ ಒಪ್ಪಿಕೊಂಡಿರುವ ವಿಡಿಯೋ.
ಫ್ಯಾಕ್ಟ್: ಈ ವೈರಲ್ ವಿಡಿಯೋ ರಾಹುಲ್ ಗಾಂಧಿ ಈ ವಿಷಯದ ಕುರಿತು ವಿವಿಧ ಭಾರತೀಯ ಸುದ್ದಿ ಸಂಸ್ಥೆಗಳಿಗೆ ನೀಡಿದ ಸಂದರ್ಶನದ ಒಂದು ಭಾಗವಾಗಿದೆ. ಪೂರ್ತಿ ವೀಡಿಯೊದಲ್ಲಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಕೂಡ ತಳ್ಳಲಾಗಿದೆಯೇ ಎಂದು ವರದಿಗಾರರು ಕೇಳಿದ ನಂತರ ಅವರು ‘ಹಾ ಕಿಯಾ ಹೈ ಕಿಯಾ ಹೈ’ ಎಂದು ಹೇಳುವುದನ್ನು ನಾವು ಕೇಳಬಹುದು. ಬಿಜೆಪಿ ಸಂಸದರನ್ನು ತಳ್ಳಿಹಾಕಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲು ವೀಡಿಯೊದ ಈ ಭಾಗವನ್ನು ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಈ ವೈರಲ್ ಹೇಳಿಕೆಯನ್ನು ಪರಿಶೀಲಿಸಲು, ನಾವು ಕೀವರ್ಡ್ ಹುಡುಕಾಟ ನಡೆಸಿದಾಗ ANI ನ ‘X’ ಪ್ರೊಫೈಲ್‌ನಲ್ಲಿ ಈ ವೀಡಿಯೊದ ಲಾಂಗರ್ ವರ್ಷನ್ (ಆರ್ಕೈವ್ ಲಿಂಕ್) ಕಂಡುಬಂದಿದೆ. ಇದನ್ನು ಡಿಸೆಂಬರ್ 19, 2024 ರಂದು ಅಪ್‌ಲೋಡ್ ಮಾಡಲಾಗಿದೆ. ವೀಡಿಯೊದಲ್ಲಿ, ಬಿಜೆಪಿ ಸಂಸದರು ರಾಹುಲ್ ಗಾಂಧಿ ಅವರನ್ನು ತಳ್ಳಿದ್ದಾರೆ ಎಂಬ ಆರೋಪದ ಬಗ್ಗೆ ವರದಿಗಾರರು ಕೇಳುತ್ತಿರುವುದನ್ನು ಕಾಣಬಹುದು. ಇದಕ್ಕೆ ಉತ್ತರಿಸುತ್ತಾ, ಅವರು ಸಂಸತ್ತನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಅದು ಸಂಭವಿಸಿದೆ, ಆ ಸಮಯದಲ್ಲಿ ಬಿಜೆಪಿ ಸಂಸದರು ಅವರನ್ನು ತಡೆಯಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ.
ಇದಾದ ನಂತರ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನೂ (ಢಕ್ಕ ಮುಕ್ಕಿ) ಸಹ ತಳ್ಳಲಾಗಿದೆಯೇ ಎಂದು ರಿಪೋರ್ಟರ್ ಕೇಳಿದಾಗ, ಇದಕ್ಕೆ ಅವರು, “..ದೇಖಿಯೇ ದೇಖಿಯೇ. ಹಾ ಕಿಯಾ ಹೈ ಕಿಯಾ ಹೈ, ಮಗರ್ ಟೀಖ್ ಹೈ, ಕೋಯಿ ಮತ್ಲಬ್.. ಢಕ್ಕಾ ಮುಕ್ಕಿ ಸೆ ಹಮೇ ಕುಚ್ ಹೋತಾ ನಹೀ ಹೈ,” ಅಂದರೆ, ಕನ್ನಡದಲ್ಲಿ, ‘..ಹೌದು, ಆದರೆ ಈ ನೂಕಾಟದಿಂದ ನಮಗೇನು ಆಗಿಲ್ಲ ಎಂದಿದ್ದಾರೆ’.
“ಇದು ನಿಮ್ಮ ಕ್ಯಾಮೆರಾದಲ್ಲಿ ಇರಬಹುದು. ನಾನು ಸಂಸತ್ತಿನ ಪ್ರವೇಶದ್ವಾರದ ಮೂಲಕ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ, ಬಿಜೆಪಿ ಸಂಸದರು ನನ್ನನ್ನು ತಡೆಯಲು, ತಳ್ಳಲು ಮತ್ತು ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದರು. ಹಾಗಾಗಿ ಇದು ಸಂಭವಿಸಿದೆ… ಹೌದು, ಇದು ನಡೆದಿದೆ (ಮಲ್ಲಿಕಾರ್ಜುನ ಖರ್ಗೆ ಅವರನ್ನು ತಳ್ಳಲಾಗುತ್ತಿದೆ). ಆದರೆ ನಾವು ನೂಕು ನುಗ್ಗಲಿನಿಂದ ಪ್ರಭಾವಿತರಾಗುವುದಿಲ್ಲ. ಆದರೆ ಇದು ಪ್ರವೇಶದ್ವಾರ ಮತ್ತು ನಮಗೆ ಒಳಗೆ ಹೋಗುವ ಹಕ್ಕಿದೆ. ಬಿಜೆಪಿ ಸಂಸದರು ನಮ್ಮನ್ನು ಒಳಗೆ ಹೋಗದಂತೆ ತಡೆಯಲು ಪ್ರಯತ್ನಿಸುತ್ತಿದ್ದರು… ಕೇಂದ್ರೀಯ ವಿಷಯವೆಂದರೆ ಅವರು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ಅಂಬೇಡ್ಕರ್ ಜಿ ಅವರ ಸ್ಮರಣೆಯನ್ನು ಅವಮಾನಿಸುತ್ತಿದ್ದಾರೆ.” ಇದರ ಪ್ರತಿಲಿಪಿಯನ್ನು ANI ಯ ‘X’ ಪೋಸ್ಟ್‌ನಲ್ಲಿಯೂ ಈ ರೀತಿ ನೀಡಲಾಗಿದೆ.
ಡಿಸೆಂಬರ್ 19, 2024 ರಂದು ಸಂಸತ್ತಿನಲ್ಲಿ ನಡೆದ ಗದ್ದಲ ಮತ್ತು ಆ ಘಟನೆಯ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಯ ಕುರಿತು ANI ಸುದ್ದಿ ವರದಿಯನ್ನು ಪ್ರಕಟಿಸಿತು. ಈ ವರದಿಯಲ್ಲಿ, ಅವರು ರಾಹುಲ್ ಗಾಂಧಿಯವರ ಮಾತುಗಳನ್ನು ಉಲ್ಲೇಖಿಸಿದ್ದಾರೆ, ಅದರಲ್ಲಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳನ್ನು ಉಲ್ಲೇಖಿಸಿ ಗಲಾಟೆ (ನೂಕಾಟ) ನಡೆದಿದೆ ಎಂದು ಹೇಳಿರುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು.
ಹೆಚ್ಚುವರಿಯಾಗಿ, PTI (ಆರ್ಕೈವ್ ಲಿಂಕ್) ಮತ್ತು IANS (ಆರ್ಕೈವ್ ಲಿಂಕ್) (ಎಎನ್‌ಐ ವೀಡಿಯೊದಲ್ಲಿ ನೋಡಿದಂತೆ) ನಂತಹ ಸುದ್ದಿ ಸಂಸ್ಥೆಗಳು ‘‘X’ ನಲ್ಲಿ (ಇಲ್ಲಿ, ಇಲ್ಲಿ) ಪೋಸ್ಟ್ ಮಾಡಿದ ಈ ಇಂಟರ್ವ್ಯೂ ನ ಇತರ ಒಂದೆರಡು ವೀಡಿಯೊಗಳನ್ನು ಸಹ ನಾವು ಪರಿಶೀಲಿಸಿದ್ದೇವೆ. ಈ ವೀಡಿಯೊಗಳಲ್ಲಿ, ಪ್ರಿಯಾಂಕಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ತಳ್ಳಲಾಯಿತು (ಢಕ್ಕಾ ಮುಕ್ಕಿ) ಎಂದು ವರದಿಗಾರರು ಕೇಳುವುದನ್ನು ನಾವು ಕೇಳಬಹುದು, ನಂತರ ಅವರು ವೈರಲ್ ವೀಡಿಯೊದಲ್ಲಿ ಹೇಳುವ ಮಾತುಗಳನ್ನು ನಾವು ಕೇಳುತ್ತೇವೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಬಿಜೆಪಿ ಸಂಸದರನ್ನು ತಳ್ಳಿಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಶೇರ್ ಮಾಡಲಾದ ವಿಡಿಯೋ ತಪ್ಪುದಾರಿಗೆಳೆಯುತ್ತಿದೆ.