ಹಕ್ಕಿಗಳು ಮನುಷ್ಯರಾಗಿ ರೂಪಾಂತರಗೊಳ್ಳುವ ಅದ್ಭುತ ನೃತ್ಯ ಪ್ರದರ್ಶನ ಎಂದು ಎಐ-ರಚಿಸಿದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಕ್ಷಿಗಳ ನೃತ್ಯ ಪ್ರದರ್ಶನಗಳ ಸೀರೀಸ್ ನಲ್ಲಿ ಹಕ್ಕಿಗಳು ಹುಡುಗಿಯಾಗಿ ನಂತರ ಹೂವಾಗಿ ರೂಪಾಂತರಗೊಳ್ಳುತ್ತದೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಿದ್ದು ಇದನ್ನು ಕಂಡು ತೀರ್ಪುಗಾರರು ಅಚ್ಚರಿಯಾಗಿದ್ದಾರೆ. ಹಾಗಾದರೆ ಈ ವೀಡಿಯೋದ ಹಿಂದಿನ ಸತ್ಯವನ್ನು ತಿಳಿಯೋಣ. 

ಕ್ಲೇಮ್: ಈ ವೀಡಿಯೊವು ಪಕ್ಷಿಗಳ ನೃತ್ಯ ಪ್ರದರ್ಶನಗಳ ಸೀರೀಸ್ ಅನ್ನು ತೋರಿಸುತ್ತದೆ. ಅಲ್ಲಿ ಹಕ್ಕಿಯು ಹುಡುಗಿಯಾಗಿ ನಂತರ ಹೂವಾಗಿ ರೂಪಾಂತರಗೊಳ್ಳುತ್ತದೆ, ಇದು ತೀರ್ಪುಗಾರರನ್ನು ಬೆರಗುಗೊಳಿಸಿದೆ. 

ಫ್ಯಾಕ್ಟ್: ವೈರಲ್ ವೀಡಿಯೊ ಕ್ಲಿಪ್ AI- ರಚಿತವಾದ ವೀಡಿಯೊವಾಗಿದೆ. “ಅತ್ಯಂತ ಅಪಾಯಕಾರಿ ಆಡಿಷನ್ಸ್ 2022 |BGT 2022।” ಎನ್ನುವ ಟೈಟಲನಲ್ಲಿ 19 ಜೂನ್ 2022 ರಂದು “ಬ್ರಿಟನ್ಸ್ ಗಾಟ್ ಟ್ಯಾಲೆಂಟ್” ಯೂಟ್ಯೂಬ್ ವೀಡಿಯೊದಿಂದ ತೀರ್ಪುಗಾರರ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಾಣಿಗಳ ನೃತ್ಯದ ವೀಡಿಯೊಗಳನ್ನು ಪೋಸ್ಟ್ ಮಾಡಲು ಪ್ರಸಿದ್ದವಾದ “ಇಂಟರೆಸ್ಟಿಂಗ್ ಮತ್ತು ನ್ಯಾಚುರಲ್” ಯೂಟ್ಯೂಬ್ ಚಾನೆಲ್‌ನಿಂದ ಪಕ್ಷಿಗಳ ನೃತ್ಯದ ವಿಡಿಯೋವನ್ನು ತೆಗೆಯಲಾಗಿದೆ. ಈ ಹ್ಯಾಂಡಲ್‌ನಲ್ಲಿರುವ ವೀಡಿಯೊಗಳು AI-ರಚಿಸಲಾಗಿದೆ ಎಂದು AI ಪತ್ತೆ ಸಾಧನಗಳು ದೃಢಪಡಿಸಿವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳ ರಿವರ್ಸ ಇಮೇಜ್ ಸೆರ್ಚಿಂಗ್ ಮಾಡಿದಾಗ ತೀರ್ಪುಗಾರರ ಅಭಿಪ್ರಾಯಗಳನ್ನು 19 ಜೂನ್ 2022 ರಂದು “ಅತ್ಯಂತ ಅಪಾಯಕಾರಿ ಆಡಿಷನ್‌ಗಳು 2022 | BGT 2022”, ಟೈಟಲ್ ಅಡಿಯಲ್ಲಿ “ಬ್ರಿಟನ್ಸ್ ಗಾಟ್ ಟ್ಯಾಲೆಂಟ್” ನಿಂದ ಅಪ್‌ಲೋಡ್ ಮಾಡಿದ ಒರಿಜಿನಲ್ ಯೂಟ್ಯೂಬ್ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೊವನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಮತ್ತು ಫ್ರೇಮ್‌ನಿಂದ ಫ್ರೇಮ್ ಅನ್ನು ವಿಶ್ಲೇಷಿಸಿದಾಗ, ಸ್ಪರ್ಧಿಗಳು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದಾಗ ತೀರ್ಪುಗಾರರ ಪ್ರತಿಕ್ರಿಯೆಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಹೊಂದಿಕೆಯಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಎಪಿಸೋಡ್ ನಲ್ಲಿ ಯಾವುದೇ ಪಕ್ಷಿಗಳ ಅಥವಾ ಪ್ರಾಣಿಗಳ ನೃತ್ಯ ಪ್ರದರ್ಶನಗಳು ಇರಲಿಲ್ಲ. ವೈರಲ್ ವೀಡಿಯೊವನ್ನು ಮಾಡಲು ಎರಡು ವಿಭಿನ್ನ ವೀಡಿಯೊಗಳ ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. 

ತದನಂತರ ನಾವು ಪಕ್ಷಿ ನೃತ್ಯದ ವೈರಲ್ ವೀಡಿಯೊ ಕೀಫ್ರೇಮ್‌ಗಳ ಮೂಲಕ ರಿವರ್ಸ್ ಇಮೇಜ್ ಸೀರಿಚಿಂಗ್ ಅನ್ನು ನಡೆಸಿದೆವು,  ಅದು ನಮ್ಮನ್ನು “ಇಂಟರೆಸ್ಟಿಂಗ್ ಮತ್ತು ನ್ಯಾಚುರಲ್” ಎಂಬ ಯೂಟ್ಯೂಬ್ ಚಾನಲ್‌ಗೆ ಕರೆದೊಯ್ಯಿತು. ಪಕ್ಷಿಗಳು ನೃತ್ಯ ಮಾಡುವ ವೈರಲ್ ವೀಡಿಯೊಗಳನ್ನು ಅಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ, ಇದು ಅನಿಮೇಷನ್, ಎಡಿಟಿಂಗ್ ಅಥವಾ AI- ರಚಿತವಾಗಿದೆ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. 

ಅನಿಮೇಷನ್, ಎಡಿಟಿಂಗ್ ಅಥವಾ AI-ರಚಿಸಿದ ವಿಷಯದ ಕುರಿತು ನಮಗೆ ಯಾವುದೇ ವಿಚಾರ ತಿಳಿದು ಬಾರದ ಕಾರಣ, ನಾವು ಈ ಕ್ಲಿಪ್‌ಗಳನ್ನು ಹೈವ್ AI ಡಿಟೆಕ್ಟರ್ ಮೂಲಕ ರನ್ ಮಾಡಿದ್ದೇವೆ, ಈ ವೀಡಿಯೊಗಳು 99.4% AI- ರಚಿತವಾಗಿದೆ ಎಂದು ಅವು ದೃಢಪಡಿಸಿದೆ.

ಇದರ ಕುರಿತು ಮತ್ತಷ್ಟು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ನೊಂದಿಗೆ ಹಗ್ಗಿಂಗ್ ಫೇಸ್ ಎಂಬ ಇನ್ನೊಂದು ಸಾಧನವನ್ನು ಬಳಸಿದೆವು. ಈ 88% ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಎಂದು ಅದು ಸೂಚಿಸಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಎಡಿಟೆಡ್ AI- ರಚಿತ ವೀಡಿಯೊವನ್ನು ಹಕ್ಕಿಗಳು ಮನುಷ್ಯರಾಗಿ ರೂಪಾಂತರಗೊಳ್ಳುವ ಅದ್ಭುತ ನೃತ್ಯ ಪ್ರದರ್ಶನ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.