ಸ್ವಾಮಿ ವಿವೇಕಾನಂದರ ಜೀವನವನ್ನು ಆಧರಿಸಿದ ಚಲನಚಿತ್ರದ ಕ್ಲಿಪ್ ಅನ್ನು 1893 ರಲ್ಲಿ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ನೀಡಿದ ಭಾಷಣದ ಮೂಲ ವೀಡಿಯೊ ಎಂದು ಹೇಳಿಕೊಳ್ಳಲಾಗುತ್ತಿದೆ

1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣದ ಒರಿಜಿನಲ್ ವಿಡಿಯೋ ಎಂದು ಹೇಳಿಕೊಳ್ಳುವ ಹಲವಾರು ಪೋಸ್ಟ್‌ಗಳು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಭಾಷಣದ ದೃಶ್ಯಗಳನ್ನು ತೋರಿಸುವ ವಿಡಿಯೋ.

ಫ್ಯಾಕ್ಟ್: ಈ ವೈರಲ್ ವೀಡಿಯೊದಲ್ಲಿರುವ ದೃಶ್ಯಗಳು ಸ್ವಾಮಿ ವಿವೇಕಾನಂದರ ಜೀವನವನ್ನು ಆಧರಿಸಿದ ‘ವಿವೇಕಾನಂದ ಬೈ ವಿವೇಕಾನಂದ’ ಚಿತ್ರದಾಗಿದೆ. ಈ ವೀಡಿಯೊವನ್ನು ‘ಶ್ರೀ ರಾಮಕೃಷ್ಣ ಮಠ ಚೆನ್ನೈ’ ಯೂಟ್ಯೂಬ್‌ನಲ್ಲಿ ಅಕ್ಟೋಬರ್ 04, 2018 ರಂದು ಅಪ್‌ಲೋಡ್ ಮಾಡಿದೆ. ಅಲ್ಲದೆ,  ಸ್ವಾಮಿ ವಿವೇಕಾನಂದರಿಗೆ ಸಂಬಂಧಿಸಿದಂತೆ ಯಾವುದೇ ಧ್ವನಿ ತುಣುಕುಗಳು ಲಭ್ಯವಿಲ್ಲ ಎಂದು ಬೇಲೂರು ಮಠದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸುವೀರಾನಂದ ಅವರು ಸೆಪ್ಟೆಂಬರ್ 11, 2020 ರಂದು ಯೂಟ್ಯೂಬ್ ವೀಡಿಯೊದಲ್ಲಿ ಸ್ಪಷ್ಟಪಡಿಸಿದ್ದಾರೆ.  ಆದ್ದರಿಂದ, ಈ ಪೋಸ್ಟ್ನಲ್ಲಿ ಮಾಡಿರುವ ಕ್ಲೇಮ್ ತಪ್ಪಾಗಿದೆ. 

ವೈರಲ್ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ಮೊದಲು ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿ ಇಂಟರ್ನೆಟ್ ಅನ್ನು ಹುಡುಕಿದಾಗ,  ಅಕ್ಟೋಬರ್ 04, 2018 ರಂದು ‘ಶ್ರೀ ರಾಮಕೃಷ್ಣ ಮಠ ಚೆನ್ನೈ’ ಯೂಟ್ಯೂಬ್‌ನಲ್ಲಿ “ವಿವೇಕಾನಂದರಿಂದ ವಿವೇಕಾನಂದ | ಪೂರ್ಣ ಚಲನಚಿತ್ರ | ಜೀವನಚರಿತ್ರೆ | ಇಂಗ್ಲೀಷ್ | “ಅಧಿಕೃತ” (ಇಂಗ್ಲಿಷ್ ನಿಂದ ಕನ್ನಡ ಅನುವಾದ) ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾದ ವೀಡಿಯೊ ಕಂಡುಬಂದಿದೆ. ಈ ವೀಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ವೈರಲ್ ವೀಡಿಯೊ ಕ್ಲಿಪ್ಪಿಂಗ್‌ನಲ್ಲಿರುವ ದೃಶ್ಯಗಳು ಟೈಮ್‌ಸ್ಟ್ಯಾಂಪ್ 13:34 ರಿಂದ ಪ್ರಾರಂಭವಾಗಿ ಟೈಮ್‌ಸ್ಟ್ಯಾಂಪ್ 13:54 ಕ್ಕೆ ಕೊನೆಗೊಳ್ಳುತ್ತವೆ ಎಂದು ತಿಳಿದುಬಂದಿದೆ. ಇದರ ಆಧಾರದ ಮೇಲೆ, ಈ ಚಿತ್ರದ ಕೆಲವು ಭಾಗವನ್ನು ಕ್ಲಿಪ್ ಮಾಡಿ ಹಂಚಿಕೊಳ್ಳಲಾಗುತ್ತಿದೆ ಎಂದು ಖಚಿತಪಡಿಸಬಹುದು.

ಈ ಸಂದರ್ಭದಲ್ಲಿ ‘ದಿ ಹಿಂದೂ’ ಸೆಪ್ಟೆಂಬರ್ 07, 2012 ರಂದು ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣವನ್ನು ರೆಕಾರ್ಡ್ ಮಾಡಿಲ್ಲ ಎಂದು ಬೇಲೂರು ಮಠ ಸ್ಪಷ್ಟಪಡಿಸಿದೆ ಎಂದು ಹೇಳುವ ನ್ಯೂಸ್ ಆರ್ಟಿಕಲ್ ಅನ್ನು ಪ್ರಕಟಿಸಿತು. ಅಲ್ಲದೆ, ಸೆಪ್ಟೆಂಬರ್ 11, 2020 ರಂದು, ಬೇಲೂರು ಮಠವು ತಮ್ಮ ಅಧಿಕೃತ/ಅಫೀಷಿಯಲ್ ಯೂಟ್ಯೂಬ್ ಚಾನೆಲ್ ‘ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್, ಬೇಲೂರು ಮಠ’ದಲ್ಲಿ “ಸ್ವಾಮಿ ವಿವೇಕಾನಂದ ವಾಯ್ಸ್  ರೆಕಾರ್ಡಿಂಗ್: ಸ್ವಾಮಿ ಸುವೀರಾನಂದ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ. ಈ ವೀಡಿಯೊದಲ್ಲಿ, ಸ್ವಾಮಿ ಸುವೀರಾನಂದರು 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾಷಣಗಳನ್ನು ರೆಕಾರ್ಡ್ ಮಾಡಲು ಯಾವುದೇ ವ್ಯವಸ್ಥೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದರೆ. ಚಿಕಾಗೋ ಸಭೆಯಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣದ ಆಡಿಯೊ ಕ್ಲಿಪ್ ಮತ್ತು ವೀಡಿಯೊವನ್ನು ಇಂಟರ್ನೆಟ್ ನಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದ್ದು,  ಸ್ವಾಮಿ ವಿವೇಕಾನಂದರ ಬಗ್ಗೆ ಯಾವುದೇ ವಾಯ್ಸ್ ಕ್ಲಿಪ್ಪಿಂಗ್ಸ್ ಲಭ್ಯವಿಲ್ಲ. 1893 ರ ಸೆಪ್ಟೆಂಬರ್ 11 ರಂದು ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರ ಭಾಷಣವನ್ನು ಬೇಲೂರು ಮಠವು ತನ್ನ ವೆಬ್‌ಸೈಟ್‌ನಲ್ಲಿ (ಇಲ್ಲಿ) ಅಪ್‌ಲೋಡ್ ಮಾಡಿದೆ. ಈ ವೈರಲ್ ವಿಡಿಯೋ ಕ್ಲಿಪ್‌ನ ಪೂರ್ಣ ಚಲನಚಿತ್ರವನ್ನು ಬೇಲೂರು ಮಠವು ತನ್ನ ವೆಬ್‌ಸೈಟ್‌ನಲ್ಲಿ (ಇಲ್ಲಿ) ಅಪ್‌ಲೋಡ್ ಮಾಡಿದೆ.

ಕೊನೆಯದಾಗಿ ಹೇಳುವುದಾದರೆ, 1893 ರಲ್ಲಿ ಚಿಕಾಗೋದಲ್ಲಿ ಅವರು ನೀಡಿದ ಭಾಷಣದ ಒರಿಜಿನಲ್  ವೀಡಿಯೊ ಎಂದು ಸ್ವಾಮಿ ವಿವೇಕಾನಂದರ ಜೀವನವನ್ನು ಆಧರಿಸಿದ ಚಲನಚಿತ್ರದ ತುಣುಕನ್ನು ಹಂಚಿಕೊಳ್ಳುತ್ತಿದ್ದಾರೆ.