ಹಾಸ್ಯನಟ ಸಮಯ್ ರೈನಾ ನಡೆಸುವ ಇಂಡಿಯಾಸ್ ಗೋಟ್ ಲ್ಯಾಟೆಂಟ್ ಎಂಬ ಕಾರ್ಯಕ್ರಮದಲ್ಲಿ ಒಂದು ದೊಡ್ಡ ವಿವಾದ ಭುಗಿಲೆದ್ದಿತು. ಈ ಎಪಿಸೋಡ್ ನಲ್ಲಿ ಪ್ರಸಿದ್ಧ ಭಾರತೀಯ ಪೊಡ್ಕ್ಯಾಸ್ಟರ್, 2024 ರ ಡಿಸ್ರಪ್ಟರ್ ಆಫ್ ದಿ ಇಯರ್ ಪ್ರಶಸ್ತಿ ವಿಜೇತ ರಣವೀರ್ ಅಲ್ಲಾಬಾಡಿಯಾ ಭಾಗವಹಿಸಿದ್ದರು. ಅವರು ಯೂಟ್ಯೂಬ್ ಚಾನೆಲ್ ಬೀರ್‌ಬೈಸೆಪ್ಸ್‌ನ ಮಾಲೀಕ ಸಹ. ಈ ಕಾರ್ಯಕ್ರಮದ ಸಮಯದಲ್ಲಿ, ಅಲ್ಲಾಬಾಡಿಯಾ ಒಬ್ಬ ಸ್ಪರ್ಧಿಗೆ ಅಸಭ್ಯ ಹೇಳಿಕೆಗಳನ್ನು ಮತ್ತು ಅನುಚಿತ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಪರಿಣಾಮವಾಗಿ ಅವರ ವಿರುದ್ಧ, ಸಮಯ್ ರೈನಾ ಮತ್ತು ಕಾರ್ಯಕ್ರಮಕ್ಕೆ ಸಂಬಂಧಿಸಿದ ಇತರರ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ವಿವಾದದ ಮಧ್ಯೆ, ರಣವೀರ್ ಅಲ್ಲಾಬಾಡಿಯಾ ಅವರ ವೀಡಿಯೊ (ಇಲ್ಲಿ) ವೈರಲ್ ಆಗಿದ್ದು, ಅದರಲ್ಲಿ ಅವರು ಅಳುತ್ತಾ, “ನನ್ನ ಎಲ್ಲಾ ಕೆಲಸಗಳು ಸ್ಥಗಿತಗೊಂಡಿರುವುದರಿಂದ ನನಗೆ ಬೇಸರವಾಗಿದೆ. ನನಗೆ ತಪ್ಪಿತಸ್ಥ ಭಾವನೆ ಇದೆ. ನನ್ನ ಕಾರಣದಿಂದಾಗಿ ನನ್ನ ತಂಡವು ಬಹಿರಂಗವಾಯಿತು” ಎಂದು ಹೇಳುತ್ತಿರುವುದನ್ನು ಕಾಣಬಹುದು. ಈ ಹೇಳಿಕೆಗಳನ್ನು ಇಟ್ಟು ಕೊಂಡು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ವೈರಲ್ ಆಗಿರುವ ವೀಡಿಯೊದಲ್ಲಿ ರಣವೀರ್ ಅಲ್ಲಾಬಾಡಿಯಾ ಅಳುತ್ತಿರುವುದು, ತಪ್ಪನ್ನು ಒಪ್ಪಿಕೊಳ್ಳುವುದರ ಮೂಲಕ ಇಂಡಿಯಾಸ್ ಗೋಟ್ ಲ್ಯಾಟೆಂಟ್ ಬಗ್ಗೆ ತಮ್ಮ ಹೇಳಿಕೆಯಿಂದಾಗಿ ತಮ್ಮ ಕೆಲಸ ಸ್ಥಗಿತಗೊಂಡಿದೆ ಎಂದು ಹೇಳುತ್ತಿರುವುವ ವಿಡಿಯೋ.
ಫ್ಯಾಕ್ಟ್: ಈ ವೀಡಿಯೊ ನಿಜವಾಗಿಯೂ ಏಪ್ರಿಲ್ 07, 2021 ರಂದು ಪೋಸ್ಟ್ ಮಾಡಲಾದ ಅವರ ಹಳೆಯ ವ್ಲಾಗ್‌ನದಾಗಿದೆ. “ಇದು ಕ್ಲಿಕ್‌ಬೈಟ್ ಅಲ್ಲ – ನನ್ನ ಕೋವಿಡ್-19 ಅನುಭವ | ವ್ಲಾಗ್ 24” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ವೀಡಿಯೊದಲ್ಲಿ, ರಣವೀರ್ COVID-19 ಗೆ ಪಾಸಿಟಿವ್ ಆಗಿರುವ ಬಗ್ಗೆ ಮಾತನಾಡಿದ್ದಾರೆ. ಈ ಕ್ಲಿಪಿಗೂ ಇತ್ತೀಚಿನ ‘ಇಂಡಿಯಾಸ್ ಗೋಟ್ ಲ್ಯಾಟೆಂಟ್’ ವಿವಾದಕ್ಕೂ ಯಾವುದೇ ಸಂಬಂಧವನ್ನು ಹೊಂದಿಲ್ಲ, ಆದರೂ ಅವರು ತಮ್ಮ X ಹ್ಯಾಂಡಲ್ ಮೂಲಕ ಕ್ಷಮೆಯಾಚಿಸಿದ್ದಾರೆ. ಆದ್ದರಿಂದ, ಕ್ಲೇಮ್ ತಪ್ಪಾಗಿದೆ.
ಈ ವೀಡಿಯೊದ ಹಿಂದಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ರಣವೀರ್ ಅಲ್ಲಾಬಾಡಿಯಾ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಅವರ ಇತ್ತೀಚಿನ ಪೋಸ್ಟ್‌ಗಳನ್ನು ಹುಡುಕಿದೆವು ಆದರೆ ವೈರಲ್ ಕ್ಲಿಪ್‌ಗೆ ಹೊಂದಿಕೆಯಾಗುವ ಯಾವುದೇ ಕ್ಲಿಪಿಂಗ್ಸ್ ನಮಗೆ ಸಿಗಲಿಲ್ಲ. ನಂತರ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಏಪ್ರಿಲ್ 7, 2021 ರಂದು ಅಪ್‌ಲೋಡ್ ಮಾಡಲಾದ “ಇದು ಕ್ಲಿಕ್‌ಬೈಟ್ ಅಲ್ಲ – ನನ್ನ ಕೋವಿಡ್-19 ಅನುಭವ | ವ್ಲಾಗ್ 24″ ಎಂಬ ಶೀರ್ಷಿಕೆಯ ವೀಡಿಯೊವನ್ನು ನಾವು ಕಂಡುಕೊಂಡೆವು . ಈ ವೀಡಿಯೊದ 00:28 ಸಮಯ ಸ್ಟ್ಯಾಂಪ್‌ನಲ್ಲಿ, ರಣವೀರ್ “ನನಗೆ ಇಂದು ಕೋವಿಡ್ ಪಾಸಿಟಿವ್ ಬಂದಿದೆ” ಎಂದು ಹೇಳಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ ಕೇಳಿಬಂದ ನಿಖರವಾದ ಹೇಳಿಕೆಗಳು ಇಲ್ಲಿ ಕೇಳಸಿಗುತ್ತದೆ. ಹೆಚ್ಚುವರಿಯಾಗಿ, ಎರಡೂ ವೀಡಿಯೊಗಳಲ್ಲಿನ ಡ್ರೆಸ್ ಮತ್ತು ಬ್ಯಾಕ್ಗ್ರೌಂಡ್ ವೈರಲ್ ಕ್ಲಿಪ್ 2024 ರದ್ದಲ್ಲ, ಬದಲಾಗಿ 2021 ರದ್ದಾಗಿದೆ ಎಂದು ತಿಳಿದು ಬಂದಿದೆ.
ಇದರ ಜೊತೆಗೆ, ಇಂಡಿಯಾಸ್ ಗೋಟ್ ಲ್ಯಾಟೆಂಟ್ ಕಾರ್ಯಕ್ರಮದ ಮೇಲಿರುವ ವಿವಾದ ಮತ್ತು ಎಫ್‌ಐಆರ್‌ಗಳು ದಾಖಲಾದ ನಂತರ, ಆ ಕಾರ್ಯಕ್ರಮವನ್ನು ಅಫೀಷಿಯಲ್ ಚಾನೆಲ್‌ಗಳಿಂದ ತೆಗೆದುಹಾಕಲಾಯಿತು. ನಂತರ ರಣವೀರ್ ಅಲ್ಲಾಬಾಡಿಯಾ ಕಾರ್ಯಕ್ರಮದ ಸಮಯದಲ್ಲಿ ಮಾಡಿದ ಟೀಕೆಗಳಿಗೆ ಕ್ಷಮೆಯಾಚಿಸುವ ವೀಡಿಯೊವನ್ನು ಬಿಡುಗಡೆ ಮಾಡಿದರು, ಅದನ್ನು ಅವರು ಫೆಬ್ರವರಿ 10, 2025 ರಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು (ಇಲ್ಲಿ, ಇಲ್ಲಿ). ಆದರೆ,ವೈರಲ್ ಆಗಿರುವ ವೀಡಿಯೊಗೆ ಈ ಘಟನೆಗೂ ಯಾವುದೇ ಸಂಬಂಧವಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಇಂಡಿಯಾಸ್ ಗೋಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ರಣವೀರ್ ಅಲ್ಲಾಬಾಡಿಯಾ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಯ ನಂತರ ಅವರು ಅಳುತ್ತಿರುವ ವಿಡಿಯೋ ಎಂದು 2021 ರ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.