ಖುರಾನ್ ಬಗೆಗಿನ ವಿವಾದಾತ್ಮಕ ಹೇಳಿಕೆಯಿರುವ 2015 ರ ವೀಡಿಯೋವನ್ನು ಫ್ರಾನ್ಸ್‌ ಸಂಸತ್ತಿನ ವೀಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

ಫ್ರೆಂಚ್ ಸಂಸತ್ತಿನಲ್ಲಿ ಖುರಾನ್ ಕುರಿತಂತೆ ಚರ್ಚೆಯಾಗಿದೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ  ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯೊಬ್ಬರು ಖುರಾನ್ ಅನ್ನು ಎಲ್ಲಾ ಕೆಟ್ಟದ್ದಕ್ಕೂ ಮೂಲವೆಂದು ಆರೋಪಿಸುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು. ಈ ಪ್ರತಿಪಾದನೆ ನಿಜವೇ ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ‘ಖುರಾನ್  ಎಲ್ಲ ದುಷ್ಟತನಗಳ ಮೂಲ’ ಎಂದು ಆರೋಪಿಸುತ್ತಿರುವ ಫ್ರೆಂಚ್ ಸಚಿವರು.

ಸತ್ಯಾಂಶ: ಬೆಲ್ಜಿಯಂ ಸಂಸತ್ತಿನಲ್ಲಿ ಅಲ್ಲಿನ ರಾಜಕಾರಣಿ ಫಿಲಿಪ್ ಡಿವಿಂಟರ್, ಖುರಾನ್ ಅನ್ನು ಅವಮಾನಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. 2015 ರಲ್ಲಿ ಪ್ಯಾರಿಸ್ ಚಾರ್ಲಿ ಹೆಬ್ಡೊ ದಾಳಿಯ ನಂತರ, ಬ್ರಸೆಲ್ಸ್‌ನಲ್ಲಿ ನಡೆದ ಫೆಡರಲ್ ಸಭೆಯಲ್ಲಿ ಭಾಷಣ ಮಾಡುವಾಗ ಫಿಲಿಪ್ ಡಿವಿಂಟರ್, “ಖುರಾನ್ ಅನ್ನು ಎಲ್ಲಾ ದುಷ್ಟತನಗಳ ಮೂಲ” ಎಂದು ಆರೋಪಿಸಿದರು. ಈ ವೀಡಿಯೊ ಮತ್ತು ಫ್ರಾನ್ಸ್‌ನಲ್ಲಿ ನಡೆದ ಇತ್ತೀಚಿನ ದಾಳಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಮೂಲಕ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ‘ಇಸ್ರೇಲ್ ಇಸ್ಲಾಂ ಮತ್ತು ಅಂಡ್ ಟೈಮ್ಸ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಹಂಚಿಕೊಂಡ ವೀಡಿಯೊದಲ್ಲಿಯೂ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಈ ಲೇಖನದಲ್ಲಿ, ಬೆಲ್ಜಿಯಂನ ಸಚಿವರು ಖುರಾನ್ ಅನ್ನು ‘ಎಲ್ಲಾ ದುಷ್ಟತನಗಳ ಮೂಲ’ ಎಂದು ಕರೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಟರ್ಕಿಯ ಸುದ್ದಿ ವೆಬ್‌ಸೈಟ್ ಜನವರಿ 23, 2015 ರಂದು ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿದೆ. ಈ ಲೇಖನದಲ್ಲಿ, ಜನವರಿ 22, 2015 ರಂದು ಮಾಡಿದ ಭಾಷಣದಲ್ಲಿ ಬೆಲ್ಜಿಯಂ ರಾಜಕಾರಣಿ ಫಿಲಿಪ್ ಡಿವಿಂಟರ್ ಸಂಸತ್ತಿನಲ್ಲಿ ಖುರಾನ್ ಅನ್ನು ಅವಮಾನಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. 2015 ರಲ್ಲಿ ಪ್ಯಾರಿಸ್ ಚಾರ್ಲಿ ಹೆಬ್ಡೊ ದಾಳಿಯ ನಂತರ, ಫಿಲಿಪ್ ಡಿವಿಂಟರ್ ಬೆಲ್ಜಿಯಂ ಸಂಸತ್ತಿನಲ್ಲಿ ಮುಸ್ಲಿಮರು ಬೆಲ್ಜಿಯಂಗೆ ವಲಸೆ ಬರುತ್ತಿರುವುದನ್ನು ವಿರೋಧಿಸಿದ್ದರು.

‘ಮಿಡಲ್ ಈಸ್ಟ್ ಐ’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯ ಕಂಡುಬರುತ್ತದೆ. ಜನವರಿ 22, 2015 ರಂದು ಬೆಲ್ಜಿಯಂನ ರಾಜಕಾರಣಿ ಫಿಲಿಪ್ ಡಿವಿಂಟರ್ ಬ್ರಸೆಲ್ಸ್‌ನ ಫೆಡರಲ್ ಪಾರ್ಲಿಮೆಂಟ್‌ನಲ್ಲಿ ಮಾಡಿದ ಭಾಷಣದಲ್ಲಿ ಖುರಾನ್ ಅನ್ನು‘ ಎಲ್ಲ ದುಷ್ಟತನಗಳ ಮೂಲ ಎಂದು ಹೇಳಿದ್ದಾರೆ’ ಎಂದು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಈ ಲೇಖನದಲ್ಲಿ ಫಿಲಿಪ್ ಡಿವಿಂಟರ್ ಅವರು ಬಲಪಂಥೀಯ ಬೆಲ್ಜಿಯಂ ರಾಜಕಾರಣಿ ಎಂದು ಉಲ್ಲೇಖಿಸಿದ್ದು, ಅವರು ಮುಸ್ಲಿಂ ವಲಸಿಗರನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡು ವಲಸೆ-ವಿರೋಧಿ ಸಂದೇಶವನ್ನು ನೀಡುತ್ತಿದ್ದಾರೆ ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2015 ರಲ್ಲಿ ಬೆಲ್ಜಿಯಂ ರಾಜಕಾರಣಿ ಖುರಾನ್ ಅನ್ನು ಅವಮಾನಿಸುವ ವೀಡಿಯೊವನ್ನು ಫ್ರೆಂಚ್ ಸಂಸತ್ತಿನಲ್ಲಿ ಖುರಾನ್ ಬಗ್ಗೆ ಚರ್ಚೆಯಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.