2015 ರ ಇಂದೋರ್ ಪೊಲೀಸರ ಅಪರಾಧ ವಿರೋಧಿ ಕಾರ್ಯಾಚರಣೆಯ ವೀಡಿಯೊವನ್ನು ಯುಪಿಯಲ್ಲಿ ನಡೆದ ಕೋಮುವಾದಿ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಅಬ್ದುಲ್ ಎಂಬ ಮುಸ್ಲಿಂ ವ್ಯಕ್ತಿ ಒಬ್ಬ ಹುಡುಗಿಗೆ ಕಿರುಕುಳ ನೀಡುತ್ತಿದ್ದ ಮತ್ತು ಉತ್ತರ ಪ್ರದೇಶ ಪೊಲೀಸರು ಆತನನ್ನು ಹಿಡಿದು ಥಳಿಸುತ್ತಿದ್ದಾರೆ ಎನ್ನುವ ವಿಡಿಯೋವೊಂದು  ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ವೈರಲ್ ಆಗಿರುವ ವೀಡಿಯೊದಲ್ಲಿ ಅಬ್ದುಲ್ ಎಂಬ ಮುಸ್ಲಿಂ ವ್ಯಕ್ತಿ ಹುಡುಗಿಗೆ ಕಿರುಕುಳ ನೀಡುತ್ತಿರುವುದ್ದು, ಉತ್ತರ ಪ್ರದೇಶ ಪೊಲೀಸರಿಂದ ಸಿಕ್ಕಿಬಿದ್ದಿರುವುದನ್ನು ತೋರಿಸಲಾಗಿದೆ.

ಫ್ಯಾಕ್ಟ್: ಈ ವೀಡಿಯೊ ಉತ್ತರ ಪ್ರದೇಶದಲ್ಲ, ಬದಲಾಗಿ  ಮೇ 2015 ರ ಮಧ್ಯಪ್ರದೇಶದ ಇಂದೋರ್‌ನದ್ದಾಗಿದೆ. ಇದು  ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಅಭಿಯಾನವನ್ನು ತೋರಿಸುತ್ತದೆ, ಅಲ್ಲಿ ಅಪರಾಧದ ವಿರುದ್ಧದ ಕ್ರಮದ ಭಾಗವಾಗಿ ಶಂಕಿತರನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಥಳಿಸಲಾಯಿತು. ಈ ಘಟನೆಯು ಯಾವುದೇ ಹುಡುಗಿಯ ಕಿರುಕುಳ ಪ್ರಕರಣಕ್ಕೂ ಸಂಬಂಧಿಸಿಲ್ಲ ಮತ್ತು ಯಾವುದೇ ಕೋಮು ಆಯಾಮವಿಲ್ಲ. ಆದ್ದರಿಂದ, ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ. 

ಈ ಹೇಳಿಕೆಯನ್ನು ಪರಿಶೀಲಿಸಲು, ಇತ್ತೀಚೆಗೆ ಬಾಲಕಿಯೊಬ್ಬರಿಗೆ ಕಿರುಕುಳ ನೀಡಿದ್ದಕ್ಕಾಗಿ ಅಬ್ದುಲ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು  ಪರಿಶೀಲಿಸಲು ನಾವು ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ ಈ ಘಟನೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ಮೂಲಗಳು ನಮಗೆ ಸಿಗಲಿಲ್ಲ.

ವೈರಲ್ ವೀಡಿಯೊವನ್ನು ಪರಿಶೀಲಿಸಲು, ನಾವು ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು 29 ಮೇ 2015 ರಂದು ABP ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು. ವರದಿಯು ಅದೇ ವೀಡಿಯೊದ ತುಣುಕುಗಳನ್ನು ಒಳಗೊಂಡಿದ್ದು,  4:22 ಟೈಮ್‌ಸ್ಟ್ಯಾಂಪ್‌ನಲ್ಲಿ, ವೈರಲ್ ದೃಶ್ಯಗಳು ಪ್ರಾರಂಭವಾಗುತ್ತವೆ, ಹಸಿರು ಶರ್ಟ್ ಧರಿಸಿದ ವ್ಯಕ್ತಿಯನ್ನು ಪೊಲೀಸರು ಥಳಿಸುತ್ತಿರುವುದನ್ನು ತೋರಿಸುತ್ತದೆ.

ವರದಿಯ ಪ್ರಕಾರ, ಈ ವೀಡಿಯೊವು ಮೇ 2015 ರಲ್ಲಿ ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಕಾರ್ಯಾಚರಣೆಯನ್ನು ತೋರಿಸುತ್ತದೆ. ಈ ಕಾರ್ಯಾಚರಣೆಯ ಸಮಯದಲ್ಲಿ, ಹಲವಾರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು,  ಲಾಠಿಗಳಿಂದ ಹೊಡೆಯುವ ಮೂಲಕ ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಯಿತು. 15 ಪೊಲೀಸ್ ಠಾಣೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಅಪರಾಧಿಗಳನ್ನು ತಡೆಯಲು ಮತ್ತು ಸಾರ್ವಜನಿಕರಿಗೆ ಧೈರ್ಯ ತುಂಬಲು 50 ಕ್ಕೂ ಹೆಚ್ಚು ಇಂತಹ ಮೆರವಣಿಗೆಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಾಚರಣೆಯು ಬೇಕಾಗಿರುವ ಅಪರಾಧಿಗಳನ್ನು ಗುರಿಯಾಗಿಸುವುದು, ಪೊಲೀಸ್ ದಾಖಲೆಗಳನ್ನು ನವೀಕರಿಸುವುದು ಮತ್ತು ಭವಿಷ್ಯದ ವಿವಾದಗಳನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉಪಕ್ರಮದ ಭಾಗವಾಗಿ, ಶಂಕಿತರನ್ನು ಅವರ ಮನೆಗಳಿಂದ ಕರೆದೊಯ್ದು, ಅವರ ಪ್ರದೇಶಗಳಲ್ಲಿ ಮೆರವಣಿಗೆ ಮಾಡಿಸಿ ನಂತರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಮೇ 2015 ರಲ್ಲಿ ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಕಾರ್ಯಾಚರಣೆಯನ್ನು ಒಳಗೊಂಡ ಹಲವಾರು ಮಾಧ್ಯಮ ವರದಿಗಳು (ಇಲ್ಲಿ ಮತ್ತು ಇಲ್ಲಿ) ನಮಗೆ ಕಂಡುಬಂದಿವೆ. ಈ ವರದಿಗಳು ವೈರಲ್ ಆಗಿರುವ ವೀಡಿಯೊ ಈ ಕಾರ್ಯಾಚರಣೆಯದ್ದಾಗಿದ್ದು, ಅಪರಾಧದ ವಿರುದ್ಧದ ಕ್ರಮದ ಭಾಗವಾಗಿ ಹಲವಾರು ಶಂಕಿತರನ್ನು ಬಂಧಿಸಿ, ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಶಿಸ್ತುಬದ್ಧಗೊಳಿಸಲಾಗಿದೆ ಎಂದು ತಿಳಿಸಿವೆ. 

ವೀಡಿಯೊದ ಕುರಿತು ಹೆಚ್ಚಿನ ವಿವರಗಳಿಗಾಗಿ ನಾವು ಈಗಾಗಲೇ ಇಂದೋರ್ ಪೊಲೀಸರನ್ನು ಸಂಪರ್ಕಿಸಿ, ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಆರ್ಟಿಕಲ್ ಅನ್ನು ಎಡಿಟ್ ಮಾಡಿದ್ದೇವೆ. ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಈ ಘಟನೆಯು ಉತ್ತರ ಪ್ರದೇಶದದ್ದಲ್ಲ ಮತ್ತು ಯಾವುದೇ ಹುಡುಗಿಯರ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ದೃಢಪಡಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2015 ರಲ್ಲಿ ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಕಾರ್ಯಾಚರಣೆಯ  ವೀಡಿಯೊವನ್ನು ಉತ್ತರ ಪ್ರದೇಶದಲ್ಲಿ ನಡೆದ ಕೋಮುವಾದಿ  ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.